ಬಾಲ್ಕನಿಯಲ್ಲಿ ನಿಂತು ನಿತ್ಯ ನಿನ್ನ ನೋಡುವೆ...
ಮೆರೆ ಸಾಮ್ನೆವಾಲಿ ಕಿಡಕಿ ಮೇ ಎಂದು ಹಾಡುವೆ...
ದುಂಡು ಮುಖ , ಇಲ್ಲ ಒಂದೂ ಮೊಡವೆ..
ಹೇ ಮಂದಸ್ಮಿತೆ ನಗುವೇ ನಿಂಗೆ ಒಡವೆ...
ನೀ ಕಾಣದಿದ್ದರೂ ಮನದಲ್ಲಿದೆ ನಿನ್ನ ಛಾಯ,
ಕನಸಿನಲ್ಲಿ ಕಂಡ ನೀನು, ಎದ್ದಾಗ ಮಾಯ..
ಮಾತಾಡುವ ಆಸೆ ಇದೆಯಾದರೂ ಏನೋ ಭಯ..
ಈ ಸಂಕಟಕ್ಕೆ ಕಾಣದಾಗಿದೆ ಉಪಾಯ..
ಅರ್ಥವಾಗಿದೆ ನನಗೀಗ ನರಿಯ ವ್ಯಥೆ...
ಕೈಗೆಟುಕದ ದ್ರಾಕ್ಷಿ ಹುಳಿಯೆಂದ ಕಥೆ...
ಸಿಗಲಾರೆ ಎಂದು ಸುರಿಸಲಾರೆ ಕಂಬನಿ..
ಏಕೆಂದರೆ ಪಕ್ಕದಲ್ಲೇ ಇದೆ ಇನ್ನೊಂದು ಬಾಲ್ಕನಿ!!!
Good one Guru. Please continue.....
ReplyDelete